ಸಸಿಮಡಿಯಲ್ಲಿ ರೋಗ ಮತ್ತು ಕೀಟಭಾದೆ ತಡೆಯುವ ಕ್ರಮಗಳು :
ಕಾರ್ಬಂಡೇಜಿಮ್ + ಮ್ಯಾಂಕೋಜಬ್ (ಸ್ಪ್ರಿಂಟ್/ಸಾಫ್) 2.5 ಗ್ರಾಂ ಪ್ರತಿ ಲೀಟರ್ ದ್ರಾವಣವನ್ನು ತಿಂಗಳಿಗೊಮ್ಮೆಯಂತೆ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು.
ರೋಗ ಮತ್ತು ಕೀಟಗಳನ್ನು ಹತೋಟಿಯಲ್ಲಿ ಇಡಲು ಒಣಗಿದ ಕುಡಿಗಳನ್ನು ತೆಗೆದು ಸಸಿಮಡಿಯನ್ನು ಸ್ವಚ್ಛವಾಗಿ ಇಟ್ಟಿರುವುದು ಅವಶ್ಯಕ.
ತಿಂಗಳಿಗೊಮ್ಮೆ ಕ್ಲೋರ್ ಪೈರಿಫಾಸ್ 50%+ ಸೈಪರ ಮೆಥಿನ್ 5% ಕೀಟನಾಶಕವನ್ನು 1.5 ಮಿಲಿ ಪ್ರತಿ ಲೀಟರ್ ದ್ರಾವಣವನ್ನು ಸಿಂಪಡಿಸುವುದು.
ಮೇ ತಿಂಗಳಿನಲ್ಲಿ ಹೂಮಿಕ್ ಆಸಿಡ್ 2 ಮಿಲಿ ದ್ರಾವಣವನ್ನು ಒಮ್ಮೆ ಸಿಂಪಡಿಸುವುದು.
ತಿಂಗಳಿಗೊಮ್ಮೆ ಬಯೋ-20 (3 ಮಿಲಿ/ಲೀ) ಅಥವಾ ಎರೆಜಲ (ಒಂದು ಭಾಗಕ್ಕೆ 4 ಭಾಗ ನೀರು ಸೇರಿಸಿದ ದ್ರಾವಣ) ಸಿಂಪಡಿಸು ವುದು.
ಬಳ್ಳಿಯ ರೋಗ ಮತ್ತು ಕೀಟ ನಿರ್ವಹಣೆ :
ಬುಡ ಕೊಳೆ ರೋಗ (ಕಟ್ಟೆ ರೋಗದ ನಿರ್ವಹಣೆ ):
ಮೇ ಕೊನೇ ವಾರದಲ್ಲಿ ಕಾಪರ್ ಆಕ್ಸಿ ಕ್ಲೋರೈಡ್ (ಬೈಟೋಕ್ಸ್) 5 ಗ್ರಾಂ/ಲೀ ನೀರಿನಲ್ಲಿ ಬೆರೆಸಿ 3-5 ಲೀ ದ್ರಾವಣವನ್ನು ಬುಡದ ಸುತ್ತಲೂ ನೆನೆಸುವುದು ಅಥವಾ ಟ್ರೈಕೋಡರ್ಮಾ ಮತ್ತು ಸುಡೋಮೊನಾಸ್‌ನ್ನು ಬುಡಕ್ಕೆ ಹಾಕುವುದು.
ಜೂನ್ ಮೊದಲನೇ ವಾರದಲ್ಲಿ ಪೊಟ್ಯಾಶಿಯಂ ಫಾಸ್ಪೋನೇಟ್ (4 ಮಿಲಿ/ಲೀ.) ದ್ರಾವಣ ಸಿಂಪರಣೆ ಹಾಗೂ ಬುಡವನ್ನು ನೆನೆಸುವುದು.
ಜೂನ್-ಆಗಸ್ ಗಳಲ್ಲಿ ಬಳ್ಳಿಯ ಬುಡದಲ್ಲಿ ನೀರು ನಿಲ್ಲದಂತೆ ಬಸಿಗಾಲುವೆ ಸರಿಯಾಗಿಡುವುದು. ಈ ಬಳ್ಳಿಯ ಬುಡದಲ್ಲಿ ಹೆಚ್ಚು ದಪ್ಪಗಿನ ಮುಚ್ಚಿಗೆಯಿದ್ದಲ್ಲಿ ಅದನ್ನು ತೆಳುವಾಗಿ ಹರಡಬೇಕು.
ಮೆಣಸಿಗೆ ಬರುವ ಇತರೇ ಕಿಟಬಾಧೆಗಳು.
ಇವುಗಳ ಹತೋಟಿಗಾಗಿ ರೋಗೊರ್ (2 ಮಿಲಿ/ಲೀ.) ಸಿಂಪರಣೆ ಮಾಡುವುದು ಮತ್ತು ಮೂರು ವಾರಗಳ ನಂತರ ಇನ್ನೊಮ್ಮೆ ಸಿಂಪಡಿಸುವುದು.
ಮುಖಪುಟ .... ಹಿಂದೆ ಹೋಗಿ